ಅಧಿರಾಜೇಂದ್ರ
	
ಚೋಳ ದೊರೆ ವೀರ ರಾಜೇಂದ್ರನ ಮಗ. ಕಲ್ಯಾಣಿಯ ಚಾಲುಕ್ಯಚಕ್ರವರ್ತಿ ಆರನೆಯ ವಿಕ್ರಮಾದಿತ್ಯನ ಸಮಕಾಲೀನ. ವೆಂಗಿಯ ಹಾಗೂ ಕಲ್ಯಾಣಿಯ ಚಾಲುಕ್ಯರ ಪ್ರಭಾವದಿಂದಾಗಿ ಚೋಳ ಸಾಮ್ರಾಜ್ಯದ ವೈಭವ ಕುಂದಿತ್ತು. ತನ್ನ ಸೋದರಿಯನ್ನು ಮದುವೆಯಾಗಿದ್ದ. ಆರನೆಯ ವಿಕ್ರಮಾದಿತ್ಯ ವಿರೋಧಿಗಳನ್ನಡಗಿಸಿ ಅಧಿರಾಜೇಂದ್ರ ಸಿಂಹಾಸನವನ್ನೇರುವುದಕ್ಕೆ ನೆರವು ನೀಡಿದ (1068). 1070ರಲ್ಲಿ ವಿರೋಧಿಗಳು ಪುನಃ ದಂಗೆಯೆದ್ದಾಗ ಅವರೊಂದಿಗೆ ಹೋರಾಡಿ ಅಧಿರಾಜೇಂದ್ರ ಹತನಾದ.
	
(ನೋಡಿ- ಚೋಳ)	
(ಎ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ